New Believer Course·8 / 10

The Bible is called the Word of God because it is God’s way of explaining who he is, who we are, where we came from, and why we exist.

ನಿಮ್ಮದನ್ನು ಕೇಳಿ

ಬೈಬಲ್ ಉಲ್ಲೇಖಗಳು

ಹಂಚಿಕೊಳ್ಳಿ
Psalm 119:105

Your word is a lamp to my feet and a light to my path.

Berean Standard Bible

Public Domain

ಇನ್ನಷ್ಟು ಓದಿ...
ಉಚಿತ ಸಂಪನ್ಮೂಲಗಳು

ಬೈಬಲನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಬಯಸುವಿರಾ?

ನಮ್ಮ ಬೈಬಲ್ ಅಧ್ಯಯನಕ್ಕೆ ಸೇರಿ

ಲಿಪ್ಯಂತರ

Kannada (ಕನ್ನಡ)
ಬ್ರಹ್ಮಾಂಡದ ದೇವರನ್ನು ನಾವು ಅರ್ಥಮಾಡಿಕೊಳ್ಳಲು ಆರಂಭಿಸುವುದು ಹೇಗೆ? ಆದಿಯಲ್ಲಿ, ದೇವರು ಮೊದಲು ಜನರನ್ನು ಸೃಷ್ಟಿಸಿ ಅವರನ್ನು ಸುಂದರವಾದ ಉದ್ಯಾನವನದಲ್ಲಿ ಇರಿಸಿದಾಗ, ಆತನು ಅವರೊಂದಿಗೆ ನಡೆದು, ಖುದ್ದಾಗಿ ಅವರಿಗೆ ಕಲಿಸಿದನು. ಅವರ ದುಷ್ಟ ನಿರ್ಧಾರಗಳು ಅವರನ್ನು ಆತನ ಪ್ರೀತಿ, ಪ್ರಸನ್ನತೆಯಿಂದ ಬೇರ್ಪಡಿಸುವವರೆಗೂ. ಆದರೂ ಜನರು ಭರವಸೆ ಕಳೆದುಕೊಳ್ಳಲಿಲ್ಲ. ಏಕೆಂದರೆ ಇತಿಹಾಸದುದ್ದಕ್ಕೂ, ದೇವರು ತನ್ನನ್ನು ಪ್ರೀತಿಸುವ ಮತ್ತು ಸೇವೆ ಮಾಡುವವರೊಂದಿಗೆ ಮಾತನಾಡುವುದನ್ನು ಮುಂದುವರೆಸಿದನು. ಮತ್ತು ಕೆಲವೊಮ್ಮೆ, ಆತನು ಅವರಿಗೆ ಕಲಿಸಿದ್ದನ್ನು ಬರೆದಿಟ್ಟುಕೊಳ್ಳಲು ಮತ್ತು ಸಂರಕ್ಷಿಸಲು ಆಜ್ಞಾಪಿಸಿದನು. ಈ ಬರಹಗಳನ್ನು ಬೈಬಲ್ ಎಂಬ 66 ಪುಸ್ತಕಗಳ ಸಂಗ್ರಹದಲ್ಲಿ ಸಂಗ್ರಹಿಸಲಾಗಿದೆ. ಬೈಬಲ್ ಪುಸ್ತಕಗಳನ್ನು ಓದುವ ಮೂಲಕ, ದೇವರು ಯಾರು, ನಮಗೆ ಏನು ಮಾತು ಕೊಟ್ಟಿದ್ದಾನೆಂದು ನಾವು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ. ಅಲ್ಲದೆ, ನಾವು ಎಲ್ಲಿಂದ ಬಂದಿದ್ದೇವೆ, ನಾವು ಯಾರು ಮತ್ತು ನಮ್ಮ ಉದ್ದೇಶವೇನು ಎಂಬುದನ್ನು ಸಹ. ಏಕೆಂದರೆ ಬೈಬಲ್‌ನ ಆಜೀವ ಮಾರ್ಗದರ್ಶನದ ಮೂಲಕ ಮಾತ್ರ ನಾವು ಆತನನ್ನು ತಿಳಿದುಕೊಳ್ಳುತ್ತಾ ಬೆಳೆಯಬಹುದು. ಮತ್ತು ಎಂದಿಗೂ ಕೊನೆಗೊಳ್ಳದ ಸ್ವತಂತ್ರ ಜೀವನವನ್ನು ಪಡೆಯಬಹುದು.
JesusFilm